February 27, 2026

Gruhalakshmi ಗೃಹಲಕ್ಷ್ಮಿ ಯೋಜನೆ ಸಹಕಾರ ಸಂಘದಿಂದ ರಾಜ್ಯದ ಎಲ್ಲಾ ಮಹಿಳೆಯರಿಗೆ 3 ಲಕ್ಷ ಸಾಲ ನೀಡಲಾಗುತ್ತಿದೆ.

Gruhalakshmi ಕರ್ನಾಟಕ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಸಂಕ್ರಾಂತಿ ಹಬ್ಬದ ದಿನವೇ ಖುಷಿಯ ಸುದ್ದಿ ಸಿಕ್ಕಿದೆ. ತಾಂತ್ರಿಕ ಅಡಚಣೆಗಳಿಂದ ತಡವಾಗಿದ್ದ ಹಣ ಬಿಡುಗಡೆಗೆ ಇದೀಗ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

25ನೇ ಕಂತಿನ ಹಣ ಬಿಡುಗಡೆಗೆ ಸಿದ್ಧತೆ

ಸರ್ಕಾರದ ಮೂಲಗಳ ಪ್ರಕಾರ, 25ನೇ ಕಂತಿನ ಹಣವನ್ನು ಜನವರಿ 14ರಿಂದ ಹಂತ ಹಂತವಾಗಿ ಬಿಡುಗಡೆ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ. ಮೊದಲ ಹಂತದಲ್ಲಿ ಬೆಂಗಳೂರು ಸೇರಿದಂತೆ ಸುಮಾರು 26 ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಹಣ ಜಮಾ ಆಗಲಿದೆ.

ಈ ಯೋಜನೆಯ ಮೂಲಕ ರಾಜ್ಯದ 1.2 ಕೋಟಿಗೂ ಹೆಚ್ಚು ಮಹಿಳೆಯರು ಪ್ರತಿ ತಿಂಗಳು ಆರ್ಥಿಕ ನೆರವು ಪಡೆಯುತ್ತಿದ್ದಾರೆ.
ಬಾಕಿ ₹4000 ಹಣ ಯಾವಾಗ ಜಮಾ? ಕಳೆದ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಕೆಲ ಫಲಾನುಭವಿಗಳಿಗೆ ಸಿಗದೇ ಉಳಿದಿತ್ತು. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟನೆ ನೀಡಿದ್ದು,

“ಎಲ್ಲಾ ಕಡತಗಳ ಪರಿಶೀಲನೆ ಅಂತಿಮ ಹಂತದಲ್ಲಿದೆ. ಮುಖ್ಯಮಂತ್ರಿಗಳ ಅನುಮೋದನೆ ದೊರಕಿದ ತಕ್ಷಣ ಬಾಕಿ ಇರುವ ಎರಡು ಕಂತಿನ ₹4000 ಹಣವೂ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ” ಎಂದು ತಿಳಿಸಿದ್ದಾರೆ.

WhatsApp Group Join Now
Telegram Group Join Now

ರೇಷನ್ ಕಾರ್ಡ್ ರದ್ದಾಗಿದ್ದರು ಹಣ ಸಿಗುತ್ತಾ?
ಇತ್ತೀಚಿನ ದಿನಗಳಲ್ಲಿ ಅನರ್ಹ ಬಿಪಿಎಲ್ ರೇಷನ್ ಕಾರ್ಡ್‌ಗಳನ್ನು ರದ್ದುಪಡಿಸಲಾಗುತ್ತಿದೆ. ಇದರಿಂದ ಗೃಹಲಕ್ಷ್ಮಿ ಹಣ ನಿಲ್ಲುತ್ತಾ ಎಂಬ ಆತಂಕ ಮಹಿಳೆಯರಲ್ಲಿ ಹೆಚ್ಚಿತ್ತು. ಆದರೆ ಸರ್ಕಾರ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದು:

➡️ ರೇಷನ್ ಕಾರ್ಡ್ ರದ್ದಾಗಿದ್ದರೂ ಮಹಿಳೆ ಆದಾಯ ತೆರಿಗೆ ಪಾವತಿದಾರರಲ್ಲದಿದ್ದರೆ, ಗೃಹಲಕ್ಷ್ಮಿ ಹಣ ಮುಂದುವರಿಯಲಿದೆ.
ಅಂದರೆ, ತೆರಿಗೆ ಪಾವತಿಸದ ಫಲಾನುಭವಿಗಳಿಗೆ ಯಾವುದೇ ಸಮಸ್ಯೆ ಇರುವುದಿಲ್ಲ.

ಹೊಸ ಯೋಜನೆ: ಗೃಹಲಕ್ಷ್ಮಿ ಸೊಸೈಟಿಯಿಂದ ₹3 ಲಕ್ಷದವರೆಗೆ ಸಾಲ

ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ‘ಗೃಹಲಕ್ಷ್ಮಿ ಸಹಕಾರ ಸಂಘ’ ಎಂಬ ಹೊಸ ವ್ಯವಸ್ಥೆಯನ್ನು ಆರಂಭಿಸಿದೆ. ಇದರ ಮೂಲಕ ಯಾವುದೇ ಶೂರಿಟಿ ಇಲ್ಲದೆ ಸಾಲ ಪಡೆಯುವ ಅವಕಾಶ ಇದೆ.
ಗೃಹಲಕ್ಷ್ಮಿ ಸೊಸೈಟಿ ಸಾಲದ ವಿವರ
ಅರ್ಹತೆ: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಆಗಿರಬೇಕು
ಸದಸ್ಯತ್ವ ಶುಲ್ಕ: ₹1,000 (ಷೇರು ಹಣ)
ಉಳಿತಾಯ: ಪ್ರತಿ ತಿಂಗಳು ಕನಿಷ್ಠ ₹200
ಸಾಲದ ಮೊತ್ತ: ₹30,000 ರಿಂದ ₹3,00,000 ವರೆಗೆ
ವಿಶೇಷತೆ: ಯಾವುದೇ ಶೂರಿಟಿ ಅಗತ್ಯವಿಲ್ಲ

ಅರ್ಜಿ ಸಲ್ಲಿಸುವುದು ಹೇಗೆ?
ಈ ಸೊಸೈಟಿಗೆ ಸೇರಲು ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದು ನೋಂದಣಿ ಮಾಡಿಕೊಳ್ಳಬಹುದು.

ಸಾಮಾನ್ಯವಾಗಿ ಎಲ್ಲರಲ್ಲು ಕಾಡುವ ಪ್ರಶ್ನೆಗಳು

ಪ್ರಶ್ನೆ: ನನ್ನ ಖಾತೆಗೆ ಇನ್ನೂ ಹಣ ಬಂದಿಲ್ಲ, ಏನು ಮಾಡಬೇಕು?
ಉತ್ತರ:
ನಿಮ್ಮ ಬ್ಯಾಂಕ್ ಖಾತೆಯಲ್ಲಿ e-KYC ಪೂರ್ಣವಾಗಿದೆಯೇ ನೋಡಿ
ಆಧಾರ್ ಕಾರ್ಡ್ ಸರಿಯಾದ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆಯೇ ಎಂದು

ಅಗತ್ಯವಿದ್ದರೆ ಬ್ಯಾಂಕ್ ಶಾಖೆಗೆ ಭೇಟಿ ನೀಡಿ Aadhaar Seeding ಅಪ್ಡೇಟ್ ಮಾಡಿಸಿ

Leave a Reply

Your email address will not be published. Required fields are marked *