March 4, 2026

Deepika scholarship ವಿದ್ಯಾರ್ಥಿ ಗಳಿಗೆ ಗುಡ್ ನ್ಯುಸ್, ₹30,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ.

Deepika scholarship ಕಾರಣದಿಂದ ಅನೇಕ ಪ್ರತಿಭಾವಂತ ವಿದ್ಯಾರ್ಥಿನಿಯರು ಪಿಯುಸಿ ನಂತರ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದೆ ಮಧ್ಯದಲ್ಲೇ ಕೈಬಿಡುವ ಪರಿಸ್ಥಿತಿ ಇನ್ನೂ ನಮ್ಮ ಸಮಾಜದಲ್ಲಿದೆ. ಇಂತಹ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಸಹಕಾರದೊಂದಿಗೆ ಅಜೀಂ ಪ್ರೇಮ್‌ಜಿ ಫೌಂಡೇಶನ್ “ದೀಪಿಕಾ ವಿದ್ಯಾರ್ಥಿವೇತನ” ಯೋಜನೆಯನ್ನು ಜಾರಿಗೊಳಿಸಿದೆ.

ಈ ಯೋಜನೆಯಡಿ ಅರ್ಹ ವಿದ್ಯಾರ್ಥಿನಿಯರಿಗೆ ಪ್ರತಿವರ್ಷ ₹30,000 ಆರ್ಥಿಕ ಸಹಾಯ ಒದಗಿಸಲಾಗುತ್ತದೆ. ಈಗಾಗಲೇ ಮೊದಲ ಹಂತದ ಅರ್ಜಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಎಂಜಿನಿಯರಿಂಗ್ ಮತ್ತು ಮೆಡಿಕಲ್ ಸೇರಿದಂತೆ ಪದವಿ–ಡಿಪ್ಲೊಮಾ ವಿದ್ಯಾರ್ಥಿನಿಯರಿಗಾಗಿ 2ನೇ ಹಂತದ ಅರ್ಜಿ ಸಲ್ಲಿಕೆ ಆರಂಭವಾಗಿದೆ.

ದೀಪಿಕಾ ವಿದ್ಯಾರ್ಥಿವೇತನ ಎಂದರೇನು?

ದೀಪಿಕಾ ವಿದ್ಯಾರ್ಥಿವೇತನವು ಕೇವಲ ವಿದ್ಯಾರ್ಥಿನಿಯರಿಗಾಗಿ ಮೀಸಲಾದ ವಿಶೇಷ ಯೋಜನೆ.
10ನೇ ತರಗತಿ ಹಾಗೂ ಪಿಯುಸಿಯನ್ನು ಸರ್ಕಾರಿ ಶಾಲೆ ಮತ್ತು ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿ, ಪ್ರಸ್ತುತ ಪದವಿ ಅಥವಾ ಡಿಪ್ಲೊಮಾ ಶಿಕ್ಷಣ ಪಡೆಯುತ್ತಿರುವವರಿಗೆ ಈ ನೆರವು ಲಭ್ಯ.

WhatsApp Group Join Now
Telegram Group Join Now

ವಿದ್ಯಾರ್ಥಿವೇತನ ಮೊತ್ತ

ವಾರ್ಷಿಕ ಸಹಾಯ: ₹30,000
4 ವರ್ಷಗಳ ಎಂಜಿನಿಯರಿಂಗ್ ಕೋರ್ಸ್: ಒಟ್ಟು ₹1,20,000
3 ವರ್ಷಗಳ ಪದವಿ (BA/BSc/BCom): ಒಟ್ಟು ₹90,000
2 ವರ್ಷಗಳ ಡಿಪ್ಲೊಮಾ: ಒಟ್ಟು ₹60,000

ಅರ್ಹತೆಗಳೇನು? (Eligibility)

✴ಅಭ್ಯರ್ಥಿನಿ ಕಡ್ಡಾಯವಾಗಿ ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಪಿಯು ಕಾಲೇಜಿನಲ್ಲಿ ಓದಿರಬೇಕು.
✴ಅನುದಾನಿತ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಓದಿದವರಿಗೆ ಈ ಯೋಜನೆ ಅನ್ವಯಿಸುವುದಿಲ್ಲ.
✴2025–26ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ವರ್ಷದ ಪದವಿ ಅಥವಾ ಡಿಪ್ಲೊಮಾ ಪ್ರವೇಶ ಪಡೆದಿರಬೇಕು.
✴ಪ್ರತಿವರ್ಷ ಎಲ್ಲಾ ವಿಷಯಗಳಲ್ಲಿ ಪಾಸ್ ಆಗಿರಬೇಕು.
✴ಬ್ಯಾಕ್‌ಲಾಗ್ ಅಥವಾ ಫೇಲ್ ಆದರೆ ವಿದ್ಯಾರ್ಥಿವೇತನವನ್ನು ರದ್ದುಗೊಳಿಸಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

ದೀಪಿಕಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯುತ್ತದೆ.
ಹಂತ–ಹಂತವಾಗಿ ಅರ್ಜಿ ಪ್ರಕ್ರಿಯೆ:

🔷ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – azimpremjifoundation.org
🔷ನಿಮ್ಮ ಮೊಬೈಲ್ ಸಂಖ್ಯೆಯಿಂದ ನೋಂದಣಿ ಮಾಡಿಕೊಳ್ಳಿ.
🔷SSLC, PUC ಅಂಕಪಟ್ಟಿ ಹಾಗೂ ಆಧಾರ್ ವಿವರಗಳನ್ನು ನಮೂದಿಸಿ.
🔷ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಿ.

ಪ್ರಮುಖ ದಿನಾಂಕ ಮತ್ತು ದಾಖಲೆಗಳು
2ನೇ ಹಂತದ ಕೊನೆಯ ದಿನಾಂಕ: 31 ಜನವರಿ 2026
ವಾರ್ಷಿಕ ವಿದ್ಯಾರ್ಥಿವೇತನ: ₹30,000

ಅಗತ್ಯ ದಾಖಲೆಗಳು:

🔆ಆಧಾರ್ ಕಾರ್ಡ್
🔆SSLC ಮತ್ತು PUC ಮಾರ್ಕ್ಸ್ ಕಾರ್ಡ್
🔆ಬ್ಯಾಂಕ್ ಪಾಸ್‌ಬುಕ್
🔆ಕಾಲೇಜಿನಿಂದ ಪಡೆದ ಬೋನಫೈಡ್ ಸರ್ಟಿಫಿಕೇಟ್

ಮುಖ್ಯ ಸೂಚನೆ ⚠️

ಅಭ್ಯರ್ಥಿನಿಯ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಕಡ್ಡಾಯ. ಆಧಾರ್ ಲಿಂಕ್ ಆಗದೇ ಇದ್ದರೆ ವಿದ್ಯಾರ್ಥಿವೇತನದ ಹಣ ಖಾತೆಗೆ ಜಮೆಯಾಗುವುದಿಲ್ಲ.

Leave a Reply

Your email address will not be published. Required fields are marked *