Mini tractor subsidy ರೈತರ ಕೃಷಿ ಕೆಲಸ ಸುಲಭವಾಗಲು ಹಾಗೂ ವೆಚ್ಚ ಕಡಿಮೆ ಮಾಡಲು ರಾಜ್ಯ ಸರ್ಕಾರ ಕೃಷಿ ಯಾಂತ್ರೀಕರಣ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ಉಳುಮೆಯಿಂದ ಆರಂಭಿಸಿ ಬಿತ್ತನೆ, ಅಂತರ ಬೇಸಾಯ ಹಾಗೂ ಬೆಳೆ ಕಟಾವುವರೆಗೂ ಬೇಕಾಗುವ ಹಲವು ಕೃಷಿ ಯಂತ್ರೋಪಕರಣಗಳನ್ನು ಶೇ. 90 ರಷ್ಟು ಸಬ್ಸಿಡಿಯಲ್ಲಿ ಪಡೆಯಬಹುದು.
ಹಾಗಾದರೆ ಈ ಯೋಜನೆಯಲ್ಲಿ ಯಾವ ಯಂತ್ರಗಳು ಲಭ್ಯ? ಯಾರು ಅರ್ಜಿ ಹಾಕಬಹುದು? ಅರ್ಜಿ ಸಲ್ಲಿಸುವ ವಿಧಾನವೇನು? ಸಂಪೂರ್ಣ ಮಾಹಿತಿ ಇಲ್ಲಿದೆ.
ಯೋಜನೆಯ ಸೌಲಭ್ಯ ಪಡೆಯಲು ಅಗತ್ಯವಿರುವ ಅರ್ಹತೆಗಳು
ಈ ಯೋಜನೆ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಜಾರಿಯಲ್ಲಿದ್ದು, ಎಲ್ಲಾ ವರ್ಗದ ರೈತರಿಗೆ ಲಭ್ಯವಿದೆ.
ಅರ್ಹತಾ ನಿಯಮಗಳು:
❇ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿರಬೇಕು
❇ಕನಿಷ್ಠ 1 ಎಕರೆ ಅಥವಾ ಅದಕ್ಕಿಂತ ಹೆಚ್ಚು ಕೃಷಿ ಭೂಮಿ ಹೊಂದಿರಬೇಕು
❇ಜಮೀನು ರೈತನ ಹೆಸರಲ್ಲೇ ಇರಬೇಕು
❇ರೈತರ ಗುರುತಿನ ಸಂಖ್ಯೆ (FID) ಹೊಂದಿರಬೇಕು
❇ಫಲಾನುಭವಿಯ ಹೆಸರಿನಲ್ಲಿ ಬ್ಯಾಂಕ್ ಖಾತೆ ಇರಬೇಕು
❇ವೈಯಕ್ತಿಕ ರೈತರು, ಜಂಟಿ ಕೃಷಿ ಗುಂಪುಗಳು ಹಾಗೂ ನೋಂದಾಯಿತ
ರೈತ ಸಹಕಾರ ಸಂಘಗಳು ಅರ್ಜಿ ಸಲ್ಲಿಸಬಹುದು
ಮಿನಿ ಟ್ರ್ಯಾಕ್ಟರ್ಗೆ ಶೇ. 90% ಸಬ್ಸಿಡಿ – ಪ್ರಮುಖ ಮಾಹಿತಿ
ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ಮಿನಿ ಟ್ರ್ಯಾಕ್ಟರ್ ಖರೀದಿಗೆ ವಿಶೇಷ ಸಹಾಯಧನ ನೀಡಲಾಗುತ್ತಿದೆ.
⏺SC/ST ರೈತರಿಗೆ: ಗರಿಷ್ಠ ₹3 ಲಕ್ಷದವರೆಗೆ ಸಬ್ಸಿಡಿ
⏺ಸಾಮಾನ್ಯ ವರ್ಗದ ರೈತರಿಗೆ: ನಿಗದಿತ ಮಿತಿಯವರೆಗೆ ಸಹಾಯಧನ (ಸುಮಾರು ₹75,000 ವರೆಗೆ)
ಲಭ್ಯತೆ ಆಧಾರದ ಮೇಲೆ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಮೂಲಕ ಈ ಸೌಲಭ್ಯ ಒದಗಿಸಲಾಗುತ್ತದೆ.
ಈ ಯೋಜನೆಯಡಿ ಸಿಗುವ ಕೃಷಿ ಯಂತ್ರೋಪಕರಣಗಳು
ರೈತರಿಗೆ ವಿವಿಧ ಹಂತದ ಕೃಷಿ ಕಾರ್ಯಗಳಿಗೆ ಉಪಯುಕ್ತವಾಗುವ ಯಂತ್ರೋಪಕರಣಗಳನ್ನು ವಿತರಿಸಲಾಗುತ್ತಿದೆ:
*⃣ಮಿನಿ ಟ್ರ್ಯಾಕ್ಟರ್
*⃣ಪವರ್ ಟಿಲ್ಲರ್
*⃣ಟ್ರ್ಯಾಕ್ಟರ್ ಚಾಲಿತ ಎಂ.ಬಿ. ಪ್ಲೋ
*⃣ರೋಟೋವೇಟರ್
*⃣ಡಿಸ್ಕ್ ಪ್ಲೋ
*⃣ಡಿಸ್ಕ್ ಹ್ಯಾರೋ
*⃣ಡೀಸೆಲ್ ಪಂಪ್ ಸೆಟ್ಗಳು
*⃣ಎಂಜಿನ್ ಚಾಲಿತ ಸಸ್ಯ ಸಂರಕ್ಷಣಾ ಉಪಕರಣಗಳು
*⃣ಕೃಷಿ ಸಂಸ್ಕರಣೆಗೆ ಅಗತ್ಯವಿರುವ ಇತರ ಯಂತ್ರೋಪಕರಣಗಳು
ಯಾರು ಎಷ್ಟು ಸಬ್ಸಿಡಿ ಪಡೆಯಬಹುದು?
ಸಾಮಾನ್ಯ ವರ್ಗದ ರೈತರಿಗೆ: ಶೇ. 50% ಸಹಾಯಧನ
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ರೈತರಿಗೆ: ಗರಿಷ್ಠ ಶೇ. 90% ವರೆಗೆ ಸಹಾಯಧನ
ಯಾವ ಯಂತ್ರಕ್ಕೆ ಎಷ್ಟು ಸಹಾಯಧನ?
🔹 ಮಿನಿ ಟ್ರ್ಯಾಕ್ಟರ್
SC/ST ರೈತರಿಗೆ – ₹3 ಲಕ್ಷದವರೆಗೆ ಸಬ್ಸಿಡಿ
ಸಾಮಾನ್ಯ ವರ್ಗ – ₹75,000 ವರೆಗೆ (ನಿಯಮಾನುಸಾರ)
🔹 ಪವರ್ ಟಿಲ್ಲರ್
ಸಾಮಾನ್ಯ ವರ್ಗ – ಶೇ. 50% (ಗರಿಷ್ಠ ₹72,500)
SC/ST – ಶೇ. 90% (ಗರಿಷ್ಠ ₹1 ಲಕ್ಷ)
🔹 ಎಂ.ಬಿ. ಪ್ಲೋ
ಸಾಮಾನ್ಯ ವರ್ಗ – ₹14,000 ರಿಂದ ₹25,000 ವರೆಗೆ
SC/ST – ಗರಿಷ್ಠ ₹51,000 ವರೆಗೆ ಸಹಾಯಧನ
ಪ್ರಮುಖ ಸೂಚನೆ
ಸಬ್ಸಿಡಿ ಮೊತ್ತ ಮತ್ತು ಯಂತ್ರೋಪಕರಣಗಳ ಲಭ್ಯತೆ ತಾಲೂಕು ಮಟ್ಟದಲ್ಲಿ ಬದಲಾಗುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೃಷಿ ಇಲಾಖೆ ಕಚೇರಿಯನ್ನು ಸಂಪರ್ಕಿಸುವುದು ಉತ್ತಮ.