Ration card ಕೇಂದ್ರ ಸರ್ಕಾರ ನಿಗದಿಪಡಿಸಿರುವ ಅರ್ಹತಾ ಮಾನದಂಡಗಳನ್ನು ಆಧರಿಸಿ ಮೈಸೂರು ಜಿಲ್ಲೆಯಲ್ಲಿ ಅನರ್ಹರಿಗೆ ನೀಡಲಾಗಿದ್ದ 4,282 ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ. ಇದೇ ಅವಧಿಯಲ್ಲಿ, ಕಳೆದ ಎರಡು ವರ್ಷಗಳಲ್ಲಿ ಒಟ್ಟು 18,932 ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಕಾರ್ಡ್ಗಳಾಗಿ ಪರಿವರ್ತಿಸಲಾಗಿದೆ.
ಜಿಲ್ಲೆಯಾದ್ಯಂತ ‘ಆಪರೇಷನ್ ಬಿಪಿಎಲ್’ ಅಭಿಯಾನದಡಿ ಪಡಿತರ ಚೀಟಿ ಪರಿಶೀಲನಾ ಕಾರ್ಯ ನಡೆಯುತ್ತಿದ್ದು, ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಕಾರ್ಡ್ ಪಡೆದುಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಅಂಕಿಅಂಶಗಳ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ಅಂತ್ಯೋದಯ ಅನ್ನ ಯೋಜನೆ (AAY)ಯ 1,147 ಕಾರ್ಡ್ಗಳು ಮತ್ತು ಆದ್ಯತಾ ಕುಟುಂಬ (PHH) ವರ್ಗದ 17,785 ಕಾರ್ಡ್ಗಳು ಸೇರಿ ಒಟ್ಟು 18,932 ಬಿಪಿಎಲ್ ಚೀಟಿಗಳು ರದ್ದಾಗಿವೆ.
ಮೈಸೂರು ತಾಲೂಕಿನಲ್ಲಿ ಅತಿ ಹೆಚ್ಚು ರದ್ದು
2025–26ನೇ ಸಾಲಿನಲ್ಲಿ ನವೆಂಬರ್ ತಿಂಗಳವರೆಗೆ ಮಾತ್ರವೇ 63 AAY ಮತ್ತು 4,219 PHH ಸೇರಿ 4,282 ಕಾರ್ಡ್ಗಳು ಅಮಾನ್ಯಗೊಂಡಿವೆ.
ಇವುಗಳಲ್ಲಿ ಮೈಸೂರು ತಾಲೂಕಿನಲ್ಲಿ 1,119 ಅನರ್ಹ ಬಿಪಿಎಲ್ ಕಾರ್ಡ್ಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಅತಿ ಹೆಚ್ಚು ಎನ್ನಲಾಗಿದೆ.
ನಂತರದ ಸ್ಥಾನದಲ್ಲಿ ನಂಜನಗೂಡು ತಾಲೂಕು (1,030 ಕಾರ್ಡ್ಗಳು) ಇದೆ. ಈ ಎರಡು ತಾಲೂಕುಗಳಲ್ಲಿ ಅಕ್ರಮ ಬಿಪಿಎಲ್ ಕಾರ್ಡ್ಗಳ ಸಂಖ್ಯೆ ಸಾವಿರದ ಗಡಿ ದಾಟಿದೆ.
ಇನ್ನೊಂದೆಡೆ, ಕೆ.ಆರ್.ನಗರ ತಾಲೂಕಿನಲ್ಲಿ ಕೇವಲ 110 ಕಾರ್ಡ್ಗಳು, ಸಾಲಿಗ್ರಾಮ, ಎಚ್.ಡಿ.ಕೋಟೆ ಹಾಗೂ ಕಾಡನಂಚಿನ ಪ್ರದೇಶಗಳಲ್ಲಿ ಸುಮಾರು 150 ಕಾರ್ಡ್ಗಳು ಮಾತ್ರ ರದ್ದುಪಡಿಸಲಾಗಿದೆ.
ಬಡವರಿಗೆ ಸಂಕಷ್ಟ, ಸರ್ಕಾರಕ್ಕೆ ಲಾಭ.
ಆಪರೇಷನ್ ಬಿಪಿಎಲ್’ ಯೋಜನೆ ಸರ್ಕಾರದ ದೃಷ್ಟಿಯಿಂದ ಶಿಸ್ತು ಮತ್ತು ಪಾರದರ್ಶಕತೆಗೆ ಸಹಾಯವಾಗಿದ್ದರೂ, ಹಲವಾರು ಕುಟುಂಬಗಳಿಗೆ ಇದು ಸಂಕಷ್ಟವಾಗಿರುವುದಾಗಿ ಹೇಳಲಾಗುತ್ತಿದೆ.
ಬಹುಜನ ಬಿಪಿಎಲ್ ಕಾರ್ಡ್ನ್ನು ಕೇವಲ ಪಡಿತರಕ್ಕಾಗಿ ಮಾತ್ರವಲ್ಲದೆ, ಆಸ್ಪತ್ರೆ ಸೌಲಭ್ಯ, ಆರೋಗ್ಯ ವಿಮೆ ಹಾಗೂ ಇತರೆ ಸರ್ಕಾರಿ ನೆರವು ಪಡೆಯಲು ಬಳಸುತ್ತಿದ್ದರು. ಕಾರ್ಡ್ ರದ್ದಾದ ಬಳಿಕ ಈ ಸೌಲಭ್ಯಗಳು ಕೈ ತಪ್ಪಿರುವುದರಿಂದ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅರ್ಹರಿಗೆ ಮತ್ತೆ ಅವಕಾಶ
ಆದಾಯದ ತಪ್ಪು ಮಾಹಿತಿ ಅಥವಾ ದಾಖಲೆಗಳ ಗೊಂದಲದಿಂದ ಕಾರ್ಡ್ ರದ್ದಾಗಿದ್ದಲ್ಲಿ, ಸೂಕ್ತ ದಾಖಲೆಗಳೊಂದಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಥವಾ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸುವ ಅವಕಾಶವಿದೆ.
ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ಹಲವು ಜನರು ಪುನಃ ಅರ್ಜಿ ಸಲ್ಲಿಸಿದ್ದು, ಪರಿಶೀಲನೆಯ ಬಳಿಕ ಅರ್ಹರಿಗೆ ಬಿಪಿಎಲ್ ಕಾರ್ಡ್ಗಳನ್ನು ಮರುನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಪಿಎಲ್ ಕಾರ್ಡ್ ರದ್ದಾಗಲು ಪ್ರಮುಖ ಕಾರಣಗಳು
ಕೆಳಕಂಡ ಅಂಶಗಳು ಪತ್ತೆಯಾದಲ್ಲಿ ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗಿದೆ:
🔷 ವಾರ್ಷಿಕ ಆದಾಯ ₹1.20 ಲಕ್ಷಕ್ಕಿಂತ ಹೆಚ್ಚು
ಜಿಎಸ್ಟಿ ಪಾವತಿದಾರರಾಗಿರುವವರು.
🔷 ಸರ್ಕಾರಿ ನೌಕರರು.
🔷 ಬೇರೆ ರಾಜ್ಯಗಳಲ್ಲೂ ಪಡಿತರ ಚೀಟಿ ಹೊಂದಿರುವವರು.
🔷 ಒಂದೇ ರಾಜ್ಯದಲ್ಲಿ ಎರಡು ಪಡಿತರ ಚೀಟಿ ಹೊಂದಿರುವವರು.
🔷 6–12 ತಿಂಗಳು ಪಡಿತರ ಪಡೆಯದೇ ಇರುವವರು.
🔷 7.5 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವವರು.